
ಪುಂಜಾಲಕಟ್ಟೆ : ಎಸ್.ಡಿ.ಪಿ.ಐ ವತಿಯಿಂದ ವಕ್ಫ್ ಮಸೂದೆ ವಿರೋಧಿಸಿ ಭಿತ್ತಿ ಪತ್ರ ಪ್ರದರ್ಶನ
ಪುಂಜಾಲಕಟ್ಟೆ:ಫೆ.14: ಕೇಂದ್ರ ಸರಕಾರ ಜಾರಿಗೆ ಮಾಡಲು ಹೊರಟಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುಂಜಾಲಕಟ್ಟೆ ವತಿಯಿಂದ ಭಿತ್ತಿ ಪತ್ರ ಪ್ರದರ್ಶನ ಮತ್ತು ಮಸೂದೆಯ ಪ್ರತಿಯನ್ನು ಹರಿದು ತಿರಸ್ಕರಿಸುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ವಕ್ಫ್ ತಿದ್ದುಪಡಿ ಮಸೂದೆಯು ಕೇಂದ್ರ ಸರ್ಕಾರದ ಹಿಡನ್ ಅಜೆಂಡಾವಾಗಿದ್ದು ಈ ಮಸೂದೆಯನ್ನು ದೇಶದ ಜಾತ್ಯತೀತರು ಒಪ್ಪಲು ಸಾಧ್ಯವಿಲ್ಲ. ವಕ್ಫ್ ಆಸ್ತಿಯು ಮುಸಲ್ಮಾನ ಸಮುದಾಯದ ಹಿರಿಯರು ಮುಸ್ಲಿಮರ ಕಲ್ಯಾಣಕ್ಕಾಗಿ ನೀಡಿದ ಆಸ್ತಿಯಾಗಿದೆ. ಇದು ಮುಸಲ್ಮಾನರ ಹಕ್ಕಾಗಿದ್ದು ಇದರಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಸಹಿಸಲಾರೆವು. ಮುಸ್ಲಿಮರನ್ನು ಟಾರ್ಗೆಟ್ ಮಾಡಿಕೊಂಡು ರಚಿಸಲಾದ ಈ ಮಸೂದೆಯನ್ನು ದೇಶದಲ್ಲಿ ಎಸ್‌ಡಿಪಿಐ ಸೇರಿದಂತೆ ಜಾತ್ಯತೀತರು, ಉಲೆಮಾ ನಾಯಕರೆಲ್ಲರೂ ವಿರೋಧಿಸಿದ್ದಾರೆ ಎಂದರು. ನಂತರ ನೂತನ ವಕ್ಫ್ ತಿದ್ದುಪಡಿ ಮಸೂದೆಯ ಪ್ರತಿಯನ್ನು ಹರಿದು ಬೆಂಕಿ ಹಚ್ಚುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದರು..
ಪ್ರತಿಭಟನೆಯಲ್ಲಿ ಬೆಳ್ತಂಗಡಿ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ, ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸದಸ್ಯ ಹನೀಫ್ ಪುಂಜಾಲಕಟ್ಟೆ, ಬ್ರಾಂಚ್ ಅಧ್ಯಕ್ಷ ಶಮೀರ್, ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.