Sat. Jul 26th, 2025
ಮೆಟ್ರೋ ಪಿಲ್ಲರ್‌ಗಳ ಮೇಲೆ ಚನ್ನಪಟ್ಟಣ ಕಲೆ ಬಿಂಬಿಸುವ ದೈನಂದಿನ ಸೆಲೆಬ್ರಿಟೀಸ್‌ಗಳ ಚಿತ್ರಣಮೆಟ್ರೋ ಪಿಲ್ಲರ್‌ಗಳ ಮೇಲೆ ಚನ್ನಪಟ್ಟಣ ಕಲೆ ಬಿಂಬಿಸುವ ದೈನಂದಿನ ಸೆಲೆಬ್ರಿಟೀಸ್‌ಗಳ ಚಿತ್ರಣ

ಮೆಟ್ರೋ ಪಿಲ್ಲರ್‌ಗಳ ಮೇಲೆ ಚನ್ನಪಟ್ಟಣ ಕಲೆ ಬಿಂಬಿಸುವ ದೈನಂದಿನ ಸೆಲೆಬ್ರಿಟೀಸ್‌ಗಳ ಚಿತ್ರಣ
ಬೆಂಗಳೂರು: ನಗರದ 50ಕ್ಕೂ ಹೆಚ್ಚು ಮೆಟ್ರೋ ಸ್ಥಂಭಗಳಿಗೆ ಚನ್ನಪಟ್ಟಣದ ಕಲೆಯನ್ನು ಬಿಂಬಿಸುವ ಕಲಾಕೃತಿಗಳನ್ನು ಬಯೋಕಾನ್‌ ಫೌಂಡೇಷನ್‌ನ ಸಿಎಸ್‌ಆರ್‌ ಅಡಿಯಲ್ಲಿ ಚಿತ್ರಿಸಲಾಗಿದೆ.

ಹುಸ್ಕೂರು ಗೇಟ್‌ನಿಂದ ಹೆಬ್ಬಗೋಡಿ ಮೆಟ್ರೋ ನಿಲ್ದಾಣದವರೆಗೂ ಬರುವ 50 ಮೆಟ್ರೋ ಪಿಲ್ಲರ್‌ಗಳ ಮೇಲೆ ಚೆನ್ನಪಟ್ಟಣದ ಕಲೆಯನ್ನು ಬಿಂಬಿಸುವ ಕಲಾಕೃತಿಗಳನ್ನು ಸುಂದರವಾಗಿ ಚಿತ್ರಿಸಲಾಗಿದೆ. “ಪಿಲ್ಲರ್‌ ಆಫ್‌ ಬೆಂಗಳೂರು- ಪ್ರತಿನಿತ್ಯದ ಚಾಂಪಿಯನ್‌ಗಳ ಸಂಭ್ರಮಾಚರಣೆ” ಶೀರ್ಷಿಕೆಯಡಿ ಈ ಚಿತ್ತಾರ ಬಿಡಿಸಲಾಗಿದೆ.

ನಮ್ಮ ದೈನಂದಿನ ಜೀವನದ ಚಾಪಿಂಯನ್ಸ್‌ಗಳಾದ ಹೂ ಮಾರಾಟಗಾರರು, ಎಲೆಕ್ಟ್ರೀಷಿಯನ್‌, ಟೈಲರ್‌ಗಳು, ಪ್ಲಂಬರ್ಸ್‌, ವೈದ್ಯರು, ದಾದಿಯರು, ಸಂಗೀತಗಾರರು, ವಿಜ್ಞಾನಿಗಳು, ಐಟಿ ವೃತ್ತಿಪರರು, ಏರೋಸ್ಪೇಸ್‌ ಸೇರಿದಂತೆ ನಮ್ಮ ಪ್ರತಿನಿತ್ಯದ ಜೀವನದ ಭಾಗವಾಗಿರುವ ಎಲ್ಲಾ ಪಾತ್ರದಾರಿಗಳ ಚಿತ್ರವನ್ನು ಚೆನ್ನಪಟ್ಟಣದ ಗೊಂಬೆಗಳಂತೆ ಸುಂದರವಾದ ಕೆತ್ತನೆಯ ರೀತಿಯಲ್ಲಿ ಚಿತ್ರಿಸಲಾಗಿದೆ.

ಬಯೋಕಾನ್ ಫೌಂಡೇಶನ್‌ನ ಮಿಷನ್ ನಿರ್ದೇಶಕ ಡಾ. ಅನುಪಮಾ ಶೆಟ್ಟಿ ಮಾತನಾಡಿ, ಪಿಲ್ಲರ್ಸ್ ಆಫ್ ಬೆಂಗಳೂರು ನಮ್ಮ ದೈನಂದಿನ ಸೆಲೆಬ್ರೆಟೀಸ್‌ಗಳನ್ನು ನೆನೆಯಲು ಈ ವಿನೂತನ ಉಪಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ.
ಹುಸ್ಕೂರ್ ಗೇಟ್ ನಿಂದ ಪ್ರಾರಂಭವಾಗುವ ಮೆಟ್ರೋ ಪಿಲ್ಲರ್‌ಗಳ ಮೇಲೆ ಕ್ರಿಯಾತ್ಮಕವಾಗಿ ಹಾಗೂ ನಮ್ಮ ನಗರದ ಸಾಂಪ್ರದಾಯಿಕ ಕಲೆಯನ್ನು ಬಿಂಬಿಸುವ ಕಲಾ ಕೃತಿಗಳನ್ನು ಚಿತ್ರಿಸಲಾಗಿದ್ದು, ನೋಡುಗರನ್ನು ಮನಸೂರೆಗೊಳಿಸುತ್ತದೆ.

ಈ ಎಲ್ಲಾ ಕಲಾಕೃತಿಗಳು ಬೀದಿ ಬದಿ ವ್ಯಾಪಾರಿಗಳು, ಆಟೋ ಡ್ರೈವರ್‌ಗಳಿಂದ ಹಿಡಿದು ಐಟಿ ವೃತ್ತಿಪರರವರೆಗೂ ಎಲ್ಲರನ್ನೂ ಒಳಗೊಂಡ ಚನ್ನಪಟ್ಟಣದ ಗೊಂಬೆಗಳ ಸ್ಪರ್ಷ ನೀಡಿ ಚಿತ್ರಿಸಿರುವುದು ಇನ್ನಷ್ಟು ವಿಭಿನ್ನವೆನಿಸುತ್ತದೆ ಎಂದು ಹೇಳಿದರು.

Leave a Reply

Your email address will not be published. Required fields are marked *