
ಕಟ್ಟಿಗೆಯ ಶೇಖರಣೆ ನೋಡುವುದೇ ಬಲು ಚಂದ
ಎಲ್ಲಾ ಕೃಷಿಕರಂತೆ ನನ್ನ ತಂದೆಯೂ ಹಿಂದಿನಿಂದಲೂ ಮಳೆಗಾಲಕ್ಕೆಂದೇ ಕಟ್ಟಿಗೆಯನ್ನು ಸಂಗ್ರಹಿಸಿ ಶೇಖರಣೆ ಮಾಡುವುದು ಅವರ ಪರಿಶ್ರಮದ ಕಾಯಕದಲ್ಲಿ ಒಂದಾಗಿದೆ(ಚಿತ್ರ ಇಲ್ಲಿ ನೀಡಲಾಗಿದೆ). ಅದನ್ನು ನೋಡುವುದೇ ಏನೊ ಸೊಗಸು. ಅದರ ಅಂದ ನೋಡಿದಾಗ ಬಚ್ಚಲು ಮನೆಯಲ್ಲಿ ನೀರು ಬಿಸಿ ಮಾಡಲು ಒಲೆಗೆ ಈ ಕಟ್ಟಿಗೆಯನ್ನು ಬಳಸುವುದೇ ಬೇಡ ಎಂದು ಅನಿಸುತ್ತದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಈ ಸಂಪ್ರದಾಯಿಕ ಕಟ್ಟಿಗೆ ಶೇಖರಣೆ ಈಗಲೂ ಇದೆ. ಈ ಭಾಗದಲ್ಲಿರುವ ಕೃಷಿಕರು ಕಟ್ಟಿಗೆ ಸೇರಿದಂತೆ ಇತರ ಉತ್ಪನ್ನಗಳ ಶೇಖರಣೆಯನ್ನು ಬೇರೆ ಬೇರೆ ಆಕಾರದಲ್ಲಿ ಮಾಡುವವರು ಇದ್ದಾರೆ. ಇದರಲ್ಲಿ ಭತ್ತದ ಶೇಖರಣೆ ಈಗಾಗಲೇ ಕೊನೆಯ ಅಂಚಿಗೆ ತಲುಪಿದೆ ಎಂಬ ನೋವಿದೆ. ಕಟ್ಟಿಗೆಯೂ ಮುಂದೊಂದು ದಿನ ಗ್ಯಾಸ್ ಗೀಸರ್, ಸೋಲಾರ್ ಸಿಸ್ಟಮ್ ಬಳಕೆಯ ಪ್ರಭಾವದಿಂದ ಇದು ಅಪರೂಪದ ವಸ್ತುವಾಗಿ ಮೂಲೆಗೆ ಸೇರುವುದಕ್ಕೆ ಕಾಲ ದೂರವಿಲ್ಲ.
ಒಂದು ಸಲ ನಾನು ಈ ರೀತಿಯಲ್ಲಿ ಕಟ್ಟಿಗೆಯನ್ನು ಜೋಡಿಸಲು ಪ್ರಯತ್ನಪಟ್ಟಿದ್ದೆ, ಆದರೆ ನನ್ನಿಂದ ಸಾಧ್ಯವಾಗಿಲ್ಲ ಎಂಬ ಅಸೂಯೆ ನನಗೆ ಇದೆ.
✍ರಫೀಕ್ ದಲ್ಕಾಜೆ, ಕೋಲ್ಪೆ