
ಬೆಳ್ತಂಗಡಿ : ಮನೆಯೊಂದರ ಆವರಣಕ್ಕೆ ಢಿಕ್ಕಿ ಹೊಡೆಸಿದ ಕಾರು ಚಾಲಕನಿಗೆ ದಂಡ
ಬೆಳ್ತಂಗಡಿ, ಫೆ.11ಉಜಿರೆ ಕಡೆಯಿಂದ ಚಾರ್ಮಾಡಿಯತ್ತ ಅಡ್ಡಾದಿಡ್ಡಿ ಕಾರು ಚಲಾಯಿಸಿ ಕೊಂಡು ಬಂದು ಚಾರ್ಮಾಡಿಯ ಮನೆಯೊಂದರ ಆವರಣಕ್ಕೆ ಢಿಕ್ಕಿ ಹೊಡೆಸಿದ ಕಾರು ಚಾಲಕನಿಗೆ ದಂಡ ವಿಧಿಸಲಾಗಿದೆ.
ಬೆಂಗಳೂರು ಮೂಲದ ಯುವಕರು ಕಾರಿನಲ್ಲಿ ಉಜಿರೆಗೆ ಬಂದಿದ್ದು, ಸೋಮವಾರ ಬೆಳಗ್ಗೆ ಅವರ ಪೈಕಿ ತೇಜಸ್ (22) ಒಬ್ಬನೇ ಕಾರನ್ನು ಚಲಾಯಿಸಿಕೊಂಡು ಚಾರ್ಮಾಡಿ ಕಡೆ ಹೊರಟಿದ್ದ. ಆತ ಕಾರನ್ನು ಕೆಲವು ವಾಹನಗಳಿಗೆ ಢಿಕ್ಕಿ ಹೊಡೆಸಿದ್ದ.
ಬೆನ್ನಟ್ಟಿ ಬಂದ ಇತರ ವಾಹನಗಳನ್ನು ಗಮನಿಸಿದ ಈತ ಇನ್ನಷ್ಟು ವೇಗವಾಗಿ ಕಾರು ಚಲಾಯಿಸಿದಾಗ ನಿಯಂತ್ರಣ ತಪ್ಪಿ ಚಾರ್ಮಾಡಿ ಸಮೀಪ ಮನೆಯೊಂದರ ಆವರಣ ಗೋಡೆಗೆ ಢಿಕ್ಕಿ ಹೊಡೆಸಿದ್ದಾನೆ. ಈ ಬಗ್ಗೆ ಪರಿಶೀಲನೆ ನಡೆಸಿದ ಬೆಳ್ತಂಗಡಿ ಸಂಚಾರ ಪೊಲೀಸರು ಚಾಲಕನಿಗೆ ದಂಡ ವಿಧಿಸಿದ್ದಾರೆ.