Fri. Mar 14th, 2025
ಮಂಗಳೂರು: ಮಾದಕ ವಸ್ತು ಎಂಡಿಎಂಎ ಮಾರಾಟ : ಆರು ಮಂದಿಯ ಬಂಧನ...!!ಮಂಗಳೂರು: ಮಾದಕ ವಸ್ತು ಎಂಡಿಎಂಎ ಮಾರಾಟ : ಆರು ಮಂದಿಯ ಬಂಧನ...!!

ಮಂಗಳೂರು: ಮಾದಕ ವಸ್ತು ಎಂಡಿಎಂಎ ಮಾರಾಟ : ಆರು ಮಂದಿಯ ಬಂಧನ…!!
ಮಂಗಳೂರು: ನಗರದ ಬಂದರು ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ 6 ಮಂದಿಯನ್ನು ಬಂದರು ಠಾಣೆಯ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳು ಪಾಂಡೇಶ್ವರ ಗ್ರೀನ್‌ಲ್ಯಾಂಡ್ ಲೇಔಟ್ ನಿವಾಸಿ ಧನಿಶ್ ಡಿ. ಕಾಂಚನ್ (19), ಪಾಂಡೇಶ್ವರ ನಿವಾಸಿ ಪೃಥ್ವಿಕ್ (18), ಬಾವುಟಗುಡ್ಡ ನಿವಾಸಿ ಫೈಜ್ ಅಂಬರ್ (23), ಜಲ್ಲಿಗುಡ್ಡೆ ನಿವಾಸಿ ತುಷಾನ್ ಡಿ. ಸುವರ್ಣ (19), ಫಳ್ನೀರ್ ನಿವಾಸಿ ರಾಜಿನ್ (21), ಫಳ್ನೀರ್ ಸ್ಟರಕ್ ರೋಡ್ ನಿವಾಸಿ ಅಫ್ಘಾನ್ (20) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ

ಫೆ.8ರಂದು ಸಂಜೆ 5:30ಕ್ಕೆ ಫಳ್ನೀರ್ ರಸ್ತೆಯ ಸಾರ್ವಜನಿಕ ರಸ್ತೆಯಲ್ಲಿ ಕಾರು ಮತ್ತು ದ್ವಿಚಕ್ರ ವಾಹನದಲ್ಲಿ 6 ಮಂದಿ ಯುವಕರು ಸಾರ್ವಜನಿಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿಯ ಮೇರೆಗೆ ಬಂದರು ಪೊಲೀಸರು ದಾಳಿ ನಡೆಸಿದ್ದಾರೆ.

ಈ ವೇಳೆ ಆರೋಪಿಗಳು ಪರಾರಿಯಾಗಳು ಯತ್ನಿಸಿದಾಗ ವಾಹನವನ್ನು ಅಡ್ಡಗಟ್ಟಿ ಆರೋಪಿಗಳನ್ನು ಬಂಧಿಸಿ 20.52ಗ್ರಾಂ ಎಂಡಿಎ0ಎ ಸಹಿತ ಲಕ್ಷಾಂತರ ರೂ. ಮೌಲ್ಯದ ವಸ್ತುಗಳಲ್ಲದೆ ಕೃತ್ಯಕ್ಕೆ ಬಳಸಿದ್ದ ಕಾರು, ಸ್ಕೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *