
ಮಂಗಳೂರು : ಸ್ಕೂಟರ್ ಹಾಗೂ ಏಸ್ ಟೆಂಪೋ ನಡುವೆ ಡಿಕ್ಕಿಯಾಗಿ ಯುವಕ ಸಾವನ್ನಪ್ಪಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಡುಪದವು ಬಳಿ ಜ.17 ರಂದು ನಡೆದಿದೆ.
SSF ಪಟ್ಟೂರಿ ಯೂನಿಟ್ ಸದಸ್ಯ ಪ್ರೀತಿಯ ಸನ್ಮಿತ್ರ ಸಿದ್ದೀಕ್ ಮುಸ್ಲಿಯಾರ್ ಪಟ್ಟೋರಿ ಕಲ್ಲರ್ಬೆ ಇದೀಗ ನಡುಪದವು ಪಿಎ ಕಾಲೇಜು ಬಳಿ ನಡೆದ ಅಪಘಾತದಲ್ಲಿ ಮರಣ ಹೊಂದಿರುತ್ತಾರೆ.
ಕೊಣಾಜೆ ಗ್ರಾಮದ ನಡುಪದವು ಕಾಟುಕೋಡಿ ನಿವಾಸಿ ಅಬೂಬಕರ್ ಸಿದ್ದೀಕ್(22) ಮೃತಪಟ್ಟ ಯುವಕ ಎಂದು ತಿಳಿದು ಬಂದಿದೆ.
ಸ್ಕೂಟರ್ ನಲ್ಲಿ ದೇರಳಕಟ್ಟೆ ಕಡೆಯಿಂದ ತೆರಳುತ್ತಿದ್ದ ಅಬೂಬಕರ್ ಸಿದ್ದೀಕ್ ಮತ್ತು ಮುಡಿಪು ಕಡೆಯಿಂದ ತೊಕ್ಕೊಟ್ಟಿನತ್ತ ಬರುತ್ತಿದ್ದ ಏಸ್ ಟೆಂಪೋ ಮಧ್ಯೆ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಸ್ಕೂಟರ್ ಭಾಗಶಃ ಟೆಂಪೋದೊಳಗೆ ನುಗ್ಗಿದೆ. ಈ ವೇಳೆ ಟೆಂಪೋದ ಮೇಲೆ ಎಸೆಯಲ್ಪಟ್ಟ ಅಬೂಬಕರ್ ಸಿದ್ದೀಕ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಟೆಂಪೋ ಚಾಲಕ ಕೂಡಾ ಗಾಯಗೊಂಡಿದ್ದಾರೆ. ಅಪಘಾತದ ಸ್ಥಳಕ್ಕೆ ಕೊಣಾಜೆ ಪೊಲೀಸರು ಭೇಟಿನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.