Sat. Mar 15th, 2025
ತಾನು ಇಸ್ರೇಲ್ ಪೌರತ್ವವನ್ನು ತ್ಯಜಿಸಿದ್ದೇನೆ: ಇಸ್ರೇಲ್ ನ ಖ್ಯಾತ ಬರಹಗಾರ ಹೇಳಿಕೆ

ತಾನು ಇಸ್ರೇಲ್ ಪೌರತ್ವವನ್ನು ತ್ಯಜಿಸಿದ್ದೇನೆ: ಇಸ್ರೇಲ್ ನ ಖ್ಯಾತ ಬರಹಗಾರ ಹೇಳಿಕೆ
ಇಸ್ರೇಲ್ ಮೂಲದ ಬರಹಗಾರರಾಗಿರುವ ಅವಿ ಸ್ಟೈನ್ ಬರ್ಗ್ ಅವರು ತನ್ನ ಇಸ್ರೇಲಿ ಪೌರತ್ವವನ್ನು ತ್ಯಜಿಸಿರುವುದಾಗಿ ಘೋಷಿಸಿದ್ದಾರೆ. ವಲಸಿಗರಿಗೆ ಫೆಲೆಸ್ತೀನ್ ಭೂಮಿಯಲ್ಲಿ ಅಕ್ರಮ ವಸತಿಗಳನ್ನು ನಿರ್ಮಿಸುವುದಕ್ಕೆ ಇಸ್ರೇಲ್ ಕಾನೂನು ಸಮ್ಮತಿಯನ್ನು ನೀಡಿದೆ. ಇಂತಹ ರಾಷ್ಟ್ರದ ಪೌರತ್ವವನ್ನು ನಾನು ವಂಶ ಹತ್ಯೆಯ ಉಪಕರಣವೆಂದು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.

1948 ರಲ್ಲಿ ಇಸ್ರೇಲ್ ಸ್ಥಾಪನೆಯಾದ ಬಳಿಕ ಅಕ್ರಮ ವಸತಿಗಳ ನಿರ್ಮಾಣಕ್ಕೆ ಮತ್ತು ಭೂ ವಿಸ್ತರಣೆಗೆ ಕಾನೂನು ಸಮ್ಮತಿ ನೀಡಲಾದ ಹಲವು ಸಂದರ್ಭಗಳನ್ನು ಅವರು ಉಲ್ಲೇಖಿಸಿದ್ದಾರೆ. 1948ರಲ್ಲಿ ನಕ್ಬದಲ್ಲಿ ಇಸ್ರೇಲ್ ಸೇನೆಯು ಸುಮಾರು 80% ಫೆಲಸ್ತೀನಿಯರನ್ನು ಅವರದೇ ನೆಲದಿಂದ ಹೊರ ಹಾಕಿದಾಗ ಅದಕ್ಕೆ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಗಿಟ್ಟಿಸುವುದಕ್ಕಾಗಿ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದವರು ಹೇಳಿದ್ದಾರೆ. ಆದರೆ ಇವೆಲ್ಲ ಕಣ್ಣೊರೆಸುವ ತಂತ್ರವಾಗಿತ್ತು ಎಂದು ಅವರು ಹೇಳಿದ್ದಾರೆ.

ಜೆರುಸಲೇಮ್ ನಲ್ಲಿ ಅಮೆರಿಕಾದ ದಂಪತಿಗಳಿಗೆ ಜನಿಸಿರುವ ಇವರು ಸಂಪ್ರದಾಯವಾದಿಯಾಗಿ ಗುರುತಿಸಿಕೊಂಡಿದ್ದಾರೆ. 1993ರಲ್ಲಿ ಇವರು ಕುಟುಂಬ ಅಮೆರಿಕದಲ್ಲಿ ಹೋಗಿ ನೆಲೆಸಿದೆ. ತಾನು ಜೆರುಸಲೇಂನಲ್ಲಿ ಇದ್ದ ಮನೆ ಫೆಲಸ್ತೀನಿಯರದ್ದಾಗಿತ್ತು ಅನ್ನೋದು ಅವರಿಗೆ ಆ ಬಳಿಕ ಗೊತ್ತಾಗಿತ್ತು ಮತ್ತು ಅದನ್ನು ಅವರು ಬಹಿರಂಗಪಡಿಸಿದ್ದರು. ಈ ಮನೆಯಲ್ಲಿದ್ದ ಫೆಲಸ್ತೀನಿ ಕುಟುಂಬವನ್ನು ಜೋರ್ಡನಿಗೆ ಬಲವಂತದಿಂದ ಕಳುಹಿಸಲಾಗಿದ್ದು ಅವರು ಮರಳಿ ಬರುವುದನ್ನು ತಡೆಯಲಾಗಿತ್ತು.

ಈಗಿನ ಇಸ್ರೇಲಿನ ವರ್ತನೆಯನ್ನು ಪ್ರಬಲವಾಗಿ ವಿರೋಧಿಸುವ ಅಮೆರಿಕದ ಯಹೂದಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿಯೇ ಇವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಮತ್ತು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ.

Leave a Reply

Your email address will not be published. Required fields are marked *