
ಬಂಟ್ವಾಳ: ಕಾವಳಕಟ್ಟೆ ಬಳಿ ಕಾರುಗಳ ನಡುವೆ ಢಿಕ್ಕಿ, ಇಬ್ಬರಿಗೆ ಗಾಯ
ಬಂಟ್ವಾಳ , ಫೆ.10 ಎರಡು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಗಾಯಗೊಂಡ ಘಟನೆ ರವಿವಾರ ಕಾವಳಕಟ್ಟೆಯಲ್ಲಿ ಸಂಭವಿಸಿದೆ.ಬಂಟ್ವಾಳ- ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಕಾವಳಕಟ್ಟೆ ಪೆಟ್ರೋಲ್ ಬಂಕ್ ಸಮೀಪ ಅಪಘಾತ ನಡೆದಿದೆ.
ಬಂಟ್ವಾಳ ಕಡೆಯಿಂದ ಸಾಗುತ್ತಿದ್ದ ಕ್ವಿಡ್ ಕಾರು ಬಲಗಡೆಗೆ ಪೆಟ್ರೋಲ್ ಬಂಕ್ ಗೆ ತಿರುಗುತ್ತಿದ್ದಾಗ ಎದುರು ಕಡೆಯಿಂದ ಬಂದ ಇನ್ನೋವಾ ಕಾರು ಢಿಕ್ಕಿ ಹೊಡಿದಿದೆ.ಕ್ವಿಡ್ ಕಾರಿನಲ್ಲಿದ್ದ ಗೇರುಕಟ್ಟೆಯ ಕುಟುಂಬದ ಮಹಿಳೆ ಹಾಗೂ ಹುಡುಗ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಢಿಕ್ಕಿಯ ರಭಸಕ್ಕೆ ಕ್ವಿಡ್ ಕಾರು ಪಲ್ಟಿಯಾಗಿದೆ. ಘಟನೆ ಸಿಸಿ ಕ್ಯಾಮರದಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದೆ. ಆದರೆ ಘಟನೆ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪುಂಜಾಲಕಟ್ಟೆ ಪೊಲೀಸರು ತಿಳಿಸಿದ್ದಾರೆ.